
Kannada Rajyotsava at Sacred Hearts’ Hr Pry School, Kulshekar
- Posted by bethanympbes@gmail.com
- Categories News & Events
- Date November 1, 2025
- Comments 0 comment
“ಎದೆ ತಟ್ಟಿ ಹೇಳು ನಾ ಬಾರತೀಯನೆಂದು ಗರ್ವದಿಂದ ಬಾಳು ನಾ ಕನ್ನಡಿಗನೆಂದು ಸಾವಿರ ಭಾಷೆ ನಾಲಿಗೆಯಲ್ಲಿರಲಿ ಕನ್ನಡ ಭಾಷೆ ಹೃದಯದಲ್ಲಿರಲಿ.”
ನವೆಂಬರ್ 1 ರಂದು ಕುಲಶೇಖರ ಸೇಕ್ರೆಡ್ ಹಾರ್ಟ್ಸ್ ಹಿ. ಪ್ರಾ. ಆಂಗ್ಲ ಮಾಧ್ಯಮ ಶಾಲೆಯಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ಅತ್ಯಂತ ವಿಜೃಂಭಣೆ ಮತ್ತು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಖ್ಯೋಪಾಧ್ಯಾಯಿನಿ ಭ| ರೀಟಾ ಶರಲ್ ರವರು ವಹಿಸಿದ್ದರು. ಮುಖ್ಯ ಅತಿಥಿ ಶಿಕ್ಷಕಿ ಸಿಂಥಿಯಾ ಶೈನಾ, ಸ್ಥಳಿಯ ಕಾನ್ವೆಂಟಿನ ಮುಖ್ಯಸ್ಥೆ ಭ| ರೀನಾ ಜುಲಿಯೆಟ್, ಸಹಾಯಕ ಮುಖ್ಯೋಪಾಧ್ಯಾಯಿನಿ ಭ| ಪ್ರಭಾತ್ ಹಾಗೂ ಸಂಯೋಜಿಕ ಶಿಕ್ಷಕಿಯವರು ಉಪಸ್ಥಿತರಿದ್ದರು.
ಕಾರ್ಯಕ್ರಮವು ಪ್ರಾರ್ಥನಾ ವಿಧಿಯೊಂದಿಗೆ ಆರಂಭಗೊಂಡಿತು ನಂತರ ಸ್ವಾಗತ ಭಾಷಣ, ಕವಿಗಳ ಪರಿಚಯದ ಕಿರು ನಾಟಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಮುಖ್ಯ ಅತಿಥಿ ಶಿಕ್ಷಕಿ ಶೈನಾರವರು ಕನ್ನಡ ರಾಜ್ಯೋತ್ಸವದ ಮಹತ್ವವನ್ನು ಹೇಳಿದರು. ಕಾರ್ಯಕ್ರಮವು ವಂದನಾರ್ಪಣೆ ಮತ್ತು ನಾಡಗೀತೆಯೊಂದಿಗೆ ಮುಕ್ತಾಯ ಗೊಂಡಿತು.
You may also like
Science Model Exhibition
February 25, 2026
Visit to Mgr Raymond FC Mascarenhas Memorial, Bendur
February 20, 2026

